29
Sep 2026
Usha Training Program By Ultratech Cement Ltd –Dated on 23/09/2026


ನಮ್ಮ ಕಾಲೇಜಿನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪನಿಯ ವತಿಯಿಂದ ದಿನಾಂಕ 23 ಸೆಪ್ಟೆಂಬರ್ 2026ರಂದು “ಯುಶಾ” ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಶಿರಸಿ ಸುತ್ತಮುತ್ತಲಿನ ಮೇಸ್ತ್ರಿಗಳು, ಟೈಲ್ ಫಿಕ್ಸಿಂಗ್ ಕಾರ್ಮಿಕರು ಹಾಗೂ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಾಟರ್ ಪ್ರೂಫಿಂಗ್ ಮತ್ತು ಟೈಲ್ ಫಿಕ್ಸಿಂಗ್ ಅಡೆಸಿವ್ ಕುರಿತು ಪ್ರಾಯೋಗಿಕ ತರಬೇತಿ ಹಾಗೂ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿವಿಲ್ ಕಂಟ್ರಾಕ್ಟರ್ ಹಾಗೂ ಶಿರಸಿ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ವಿನಾಯಕ ಗಾಂವ್ಕರ್ ಭಾಗವಹಿಸಿದ್ದರು. ಹಾಗೂ ವರ್ಧನ್ ಏಜೆನ್ಸಿಯ ಪ್ರೊಪರೇಟರ್ ಚಿದಾನಂದ ಹೆಗಡೆ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅಲ್ಟ್ರಾಟೆಕ್ ಕಂಪನಿಯ ಬಿಲ್ಡಿಂಗ್ ಪ್ರಾಡಕ್ಟ್ ಡಿವಿಷನ್ ಅಸಿಸ್ಟೆಂಟ್ ಮ್ಯಾನೇಜರ್ ದರ್ಪಣ್ ಪಾಟೀಲ್ ಕಂಪನಿಯ ಉತ್ಪನ್ನಗಳ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲರು ಹಾಗೂ ಸಿವಿಲ್ ವಿಭಾಗದ ಮುಖ್ಯಸ್ಥರು ಹಾಜರಿದ್ದರು.