21 Apr 2026

Unveiling Ceremony of the Statue of Bharat Ratna Sir. M Visvesvaraya–Dated on 17-04-2026

ನಮ್ಮ ಕಾಲೇಜಿನಲ್ಲಿ ಮಹಾನ್ ಇಂಜಿನಿಯರ್ ಹಾಗೂ ರಾಷ್ಟ್ರಪ್ರೇಮಿ, ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ಕಾಲೇಜಿನ ವಾರ್ಷಿಕೋತ್ಸವದಂದು ಅಂದರೆ 17-04 -2026ರಂದು ಅತ್ಯಂತ ಗೌರವಯುತ ಹಾಗೂ ಸ್ಮರಣೀಯವಾಗಿ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ. ಗೀತಾ ಪಾಟೀಲ್ ಡಿವೈಎಸ್ಪಿ ಶಿರಸಿ ಉಪ ವಿಭಾಗ ಇವರು ಪ್ರತಿಮೆಯನ್ನು ಅನಾವರಣ ಗೊಳಿಸಿದರು. ನಮ್ಮ ಕಾಲೇಜಿನ ಉಪಸಮಿತಿ ಅಧ್ಯಕ್ಷರಾದ ಶ್ರೀ ಎಲ್. ಆರ್ ಹೆಗಡೆ ಮುಂಡಗೇಸರ , ಉಪಸಮಿತಿ ಸದಸ್ಯರಾದ ಶ್ರೀ ಪಾಂಡುರಂಗ ಪೈ ,ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಜಿ ಹೆಗಡೆ ಹಾಗೂ ಎಲ್ಲಾ  ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಪ್ರತಿಮೆ ಅನಾವರಣವಾದ ಕ್ಷಣ ಎಲ್ಲರ ಮನಗಳಲ್ಲಿ ಗೌರವ ಮತ್ತು ಹೆಮ್ಮೆ ತುಂಬಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಜಿ ಹೆಗಡೆಯವರ ಸಂಕಲ್ಪ, ಸಿವಿಲ್ ವಿಭಾಗದ ಉಪನ್ಯಾಸಕರಾದ ಶ್ರೀ ಜಯಂತ್ ನಾಯ್ಕ್ ಇವರ ವಿಶೇಷ ಮುತುವರ್ಜಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರ ತನು,ಮನ, ಧನಗಳ ಕೊಡುಗೆಯಿಂದ ನಿರ್ಮಿತವಾದ ಸರ್ .ಎಂ. ವಿಶ್ವೇಶ್ವರಯ್ಯ ಅವರ ಮೂರ್ತಿಯು ಬಹಳ ಸುಂದರವಾಗಿ ಮೂಡಿಬಂದಿತ್ತು .ಸರ್ .ಎಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯಂತ ಶ್ರೇಷ್ಠ ಇಂಜಿನಿಯರ್ ಗಳಲ್ಲಿ ಒಬ್ಬರಾಗಿದ್ದು, ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ಮತ್ತು ನಿಷ್ಠೆ ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆಯಾಗಿವೆ.ಅವರ ಜೀವನ ಶೈಲಿ ಮತ್ತು ಕಾರ್ಯನಿಷ್ಠೆಯನ್ನು ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಅವರ ಒಂದು ಪ್ರಖ್ಯಾತ ಸಂದೇಶವಾದ  “It is better to workout than rust out” ಎಂಬ ಈ ಸಂದೇಶವನ್ನು ಮೂರ್ತಿಯ ಕೆಳಭಾಗದಲ್ಲಿ ಕೆತ್ತಿಸಲಾಗಿದೆ .ಈ ಪ್ರತಿಮೆಯ ಅನಾವರಣ ಕಾರ್ಯಕ್ರಮವು ನಮ್ಮ ಕಾಲೇಜಿನ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಿದ್ದು, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯ ದೀಪವಾಗಿ ಉಳಿಯಲಿದೆ.