21 Apr 2026

Pool Campus Interview — Dated on 15-04-2026

ದಿನಾಂಕ 15- 04- 2026 ರಂದು ನಮ್ಮ ಕಾಲೇಜಿನಲ್ಲಿ CTDI ಕಂಪನಿ ವತಿಯಿಂದ “Pool Campus Interview” ನಡೆದಿದ್ದು ,ಇದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಸಿದ್ದಾಪುರ ಮತ್ತು ಮಂಡಗೋಡ್ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ಜೊತೆಗೆ ಎಂ. ಇ.ಎಸ್ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ಇಂಟರ್ವ್ಯೂನಲ್ಲಿ ನಮ್ಮ ಕಾಲೇಜಿನ 03 ವಿದ್ಯಾರ್ಥಿಗಳು , ಸಿದ್ದಾಪುರ ಕಾಲೇಜಿನ ಒಬ್ಬ ವಿದ್ಯಾರ್ಥಿ, ಮಂಡಗೋಡ್ ಕಾಲೇಜಿನ ಒಬ್ಬ ವಿದ್ಯಾರ್ಥಿ ಹಾಗೂ ಐಟಿಐ ಕಾಲೇಜಿನ ಒಬ್ಬ ವಿದ್ಯಾರ್ಥಿ ಆಯ್ಕೆಯಾಗಿರುತ್ತಾರೆ. ಮಾಡರ್ನ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಿ.ಎಂ ಹೆಗಡೆ ಮುಳಖಂಡ, ಕಾಲೇಜಿನ ಉಪಸಮಿತಿಯ ಅಧ್ಯಕ್ಷರಾದ ಶ್ರೀ ಎಲ್.ಆರ್.ಹೆಗಡೆ ಮುಂಡಗೇಸರ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ. ಜಿ ಹೆಗಡೆ, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು  ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಆದ ಶ್ರೀ ಸತೀಶ್ ನಾಯ್ಕ್ ಅವರು ಮುತುವರ್ಜಿಯಿಂದ ಈ ಇಂಟರ್ವ್ಯೂವನ್ನು ಸಂಘಟಿಸಿದರು.