23 Jul 2026

Induction Program — 24-06-2026 to 04-07-2026

ನಮ್ಮ ಕಾಲೇಜಿನ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ “ಸ್ವಾಗತ ಮತ್ತು ದಿಕ್ಸೂಚಿ ಕಾರ್ಯಕ್ರಮ ಸಪ್ತಾಹ” (“ಇಂಡಕ್ಷನ್ ಪ್ರೋಗ್ರಾಮ್” )ನ್ನು 24 -06-2026 ರಿಂದ 04-07-2026 ರ ವರೆಗೆ ನಡೆಸಲಾಯಿತು. ಎಲ್ಲ ವಿಭಾಗದ ಮುಖ್ಯಸ್ಥರಿಂದ ವಿದ್ಯಾರ್ಥಿಗಳಿಗೆ ವಿವಿಧ ಪ್ರಯೋಗಾಲಯಗಳ ಸ್ಥೂಲ ಪರಿಚಯ ಮಾಡಿಕೊಡಲಾಯಿತು.

ಪೊಲೀಸ್ ಇಲಾಖೆ ವತಿಯಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಮತ್ತು ಇತರ ಅಪರಾಧಿ ಕೃತ್ಯಗಳು ಹರಡುತ್ತಿರುವ ಬಗ್ಗೆ ತಿಳುವಳಿಕೆ ಮತ್ತು ಇಂತಹ ದುಶ್ಚಟಗಳಿಂದ ದೂರವಿರುವ ಬಗ್ಗೆ, ತಮ್ಮನ್ನು ರಕ್ಷಿಸಿಕೊಳ್ಳುವ ಬಗ್ಗೆ ಉಪಯುಕ್ತ ಮಾರ್ಗದರ್ಶನ ನೀಡಲಾಯಿತು.

ಯುವಜನರನ್ನು ಕಾಡುತ್ತಿರುವ ಮಾನಸಿಕ ಒತ್ತಡ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ಪರಿಹಾರ ಮಾರ್ಗಗಳನ್ನು ಶಿರಸಿಯ ಸಿಗಂಧಿನಿ ಕ್ಲಿನಿಕ್ ನ ವೈದ್ಯರಾಗಿರುವ ಡಾಕ್ಟರ್. ಮಧುಮಿತ ಎನ್ .ಎಸ್ ಇವರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಡಾಕ್ಟರ್ ಎಸ್. ವಿ ಭಟ್, ಪಂಡಿತ್ ಜನರಲ್ ಆಸ್ಪತ್ರೆ, ಇವರು ರಕ್ತದಾನದ ಉಪಯುಕ್ತತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು .

ಹೆಸ್ಕಾಂ ಶಿರಸಿ ವಿಭಾಗದ ಅಭಿಯಂತರರು ವಿದ್ಯುತ್ ಅವಘಡಗಳ ಸಾಮಾನ್ಯ ಕಾರಣಗಳು ,ಬಳಕೆದಾರರು ತಿಳಿದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಮಾರ್ಗದರ್ಶನಗಳನ್ನು ಶ್ರೀ ವಿಜಯೇಂದ್ರ ಲಾಡ್ ಮತ್ತು ಶ್ರೀ ಕಿರಣ್ ಭಟ್ ಇವರು ನೀಡಿ ಸ್ಪೂರ್ತಿ ತುಂಬಿದರು.

“Heart fulness ಯೋಗ” ಸಂಸ್ಥೆ ಶಿರಸಿ ಘಟಕದ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಸಹಜ ಯೋಗ ವಿಧಾನಗಳನ್ನು ತಿಳಿಸಿ ತರಬೇತಿ ನೀಡಲಾಯಿತು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಉತ್ತರ ಕನ್ನಡ ಘಟಕದ ಅಧಿಕಾರಿಗಳಾದ ಶ್ರೀ ವೀರಣ್ಣ ಎಂ. ಮತ್ತು ಇತರ ಪದಾಧಿಕಾರಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಉದ್ದೇಶ ತರಬೇತಿಗಳ ವಿವರಗಳನ್ನು ವಿಡಿಯೋ ಪ್ರಾತ್ಯಕ್ಷತೆ ಮೂಲಕ ನೀಡಿದರು. ಕಾಲೇಜು ವಿದ್ಯಾರ್ಥಿಗಳಿಗೆ ರೋವರ್ ಮತ್ತು ರೇಂಜರ್ ಅಡಿಯಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿ ಮತ್ತು ರಾಷ್ಟ್ರಪತಿ ಪ್ರಶಸ್ತಿ ಸಮುದಾಯ ಸೇವೆಗಳಿಗಾಗಿ ನೀಡುವ ಉಪರಾಷ್ಟ್ರಪತಿ ಪ್ರಶಸ್ತಿಗಳ ವಿಸ್ತೃತ ಮಾರ್ಗದರ್ಶನಗಳನ್ನು ಕಾಲೇಜಿನ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಯೋಜಕರಾಗಿರುವ E &E ವಿಭಾಗದ ಶ್ರೀ ಅನಂತ ನಾಯಕ್ ಇವರು ನೀಡಿದರು.

ಕಾಲೇಜಿನ ಪ್ರಾಚಾರ್ಯರು, ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಈ ಎಲ್ಲ ಕಾರ್ಯಕ್ರಮದಲ್ಲಿ ಹಾಜರಿದ್ದರು.

Download