28 Oct 2026

Free Eye Camp –Dated on 16-10-2026

ಲಯನ್ಸ್ ಕ್ಲಬ್ ಶಿರಸಿ ,ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ (ರಿ), ಸ್ಪಂದನ ಸೇವಾ ಟ್ರಸ್ಟ್(ರಿ ) ಹಡಿನಬಾಳ, ತಾ : ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ಎಂ. ಎಂ. ಜೋಶಿ ಗಣೇಶ ನೇತ್ರಾಲಯ ಮತ್ತು ಲಯನ್ ನಯನ ನೇತ್ರ ಬಂಡಾರ ಇವರ ಸಹಕಾರದೊಂದಿಗೆ ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ದಿನಾಂಕ 16-10-2026 ಶುಕ್ರವಾರದಂದು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಎಲ್.ಆರ್. ಹೆಗಡೆ ಅಧ್ಯಕ್ಷರು, ಎಂ.ಇ.ಎಸ್ ಆರ್ .ಎನ್ ಶೆಟ್ಟಿ ಪಾಲಿಟೆಕ್ನಿಕ್ ಉಪಸಮಿತಿ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಮನೋಹರ್ ಮಲ್ಮನೆ ಎಂ .ಜೆ .ಎಫ್ ಅಧ್ಯಕ್ಷರು ಲಯನ್ ಕ್ಲಬ್ ಶಿರಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಕೆ ವಿ .ಶಿವರಾಂ ಮುಖ್ಯಸ್ಥರು ಎಂ.ಎಂ. ಜೋಶಿ ಗಣೇಶ ನೇತ್ರಾಲಯ ಇವರು ಆಗಮಿಸಿದ್ದರು. ಅದೇ ರೀತಿಯಾಗಿ ಲಯನ್ ಉದಯ ಸ್ವಾದಿ ,ಗಣೇಶ್ ಹೆಗಡೆ ಹಡಿನಬಾಳ್, ಲಯನ್ ಡಾ. ವಿಶ್ವನಾಥ್ ಅಂಕದ,ಲಯನ್ ಅಶ್ವಥ್ ಹೆಗಡೆ, ಲಯನ್ ಶ್ರೀಧರ್ ಹೆಗಡೆ ,ಲಯನ್ ಬಸವರಾಜ ಚಕ್ರಸಾಲಿ, ಲಯನ್ ಶಂಕರ್ ಹೆಗಡೆ ಉಪಸ್ಥಿತರಿದ್ದರು. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಾಂತರಾಮ್ ಭಟ್ ಚಿತ್ರಗಿ ಇವರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 250ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

Download