24
Feb 2026
POWER POINT PRESENTATION ON “PHOTONIC SENSORS” BY SHRI. VENKATESH BADAGERI–DATED ON 23-02-2026-I
ನಮ್ಮ ಎಂ.ಇ.ಎಸ್. ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಶ್ರೀ.ವೆಂಕಟೇಶ್ ಬಡಗೇರಿ ಹಾಗೂ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನ ಉಪನ್ಯಾಸಕರಾದ ಡಾ. ರಂಜಿತ್ ಗೌಡ ಅವರು ಜಂಟಿಯಾಗಿ ಮಂಡಿಸಿದ ‘ಫೋಟೋನಿಕ್ಸ್ ಸೆನ್ಸಾರ್’ ತಂತ್ರಜ್ಞಾನದ ಸಂಶೋಧನಾ ಯೋಜನೆಗೆ ಕರ್ನಾಟಕ ಸರ್ಕಾರವು 1.25 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಘೋಷಿಸಿದೆ. ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ ಪ್ಯಾರಾಸೈಟ್ ಹಾಗೂ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಈ ಫೋಟೋನಿಕ್ಸ್ ಸೆನ್ಸಾರ್‌ಗಳನ್ನು ಬಳಸುವ ಕುರಿತು ಇವರು ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರದ ಐಟಿ-ಬಿಟಿ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಇನ್ನೋವೇಶನ್ ಆಂಡ್ ಸೊಸೈಟಿ (KITS), ಈ ಸಂಶೋಧನೆಯನ್ನು ‘ಇನ್ನೋವೇಶನ್ ಲ್ಯಾಬ್’ ಯೋಜನೆಯಡಿ ಗುರುತಿಸಿದೆ. ಈ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಸಂಶೋಧನೆಗಾಗಿ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಬಯೋಟೆಕ್ನಾಲಜಿ ಲ್ಯಾಬ್ ನಿರ್ಮಿಸಲು 1.25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಂಜುಶ್ರೀ ಎನ್. ಅವರು ಈ ಇಬ್ಬರೂ ಸಾಧಕ ಉಪನ್ಯಾಸಕರನ್ನು ಅಭಿನಂದಿಸಿದ್ದು, ಯೋಜನೆಯ ಅನುಷ್ಠಾನದ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ.
ಈ ಯೋಜನೆಯು ರಾಜ್ಯದ ಪಾಲಿಟೆಕ್ನಿಕ್ ಶಿಕ್ಷಣ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಾಗಿದ್ದು, ಸಂಶೋಧನೆಗೆ ಪ್ರೋತ್ಸಾಹ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೆ-ಐಟಿಎಸ್ ಆಯುಕ್ತರಾದ ರಾಹುಲ್ ಶರಣಪ್ಪ ಸಂಕನೂರ (IAS) ಅವರು ಧನ್ಯವಾದ ಸಲ್ಲಿಸಿದ್ದಾರೆ.
ದಿನಾಂಕ 23-02-2026 ರಂದು ನಮ್ಮ ಕಾಲೇಜಿನಲ್ಲಿ ಶ್ರೀ.ವೆಂಕಟೇಶ್ ಬಡಗೇರಿ ಅವರು ತಮ್ಮ ಸಂಶೋಧನೆಯ ಕುರಿತು ಮಾಹಿತಿಯನ್ನು (presentation) ನೀಡಿದರು. ಕಾರ್ಯಕ್ರಮದಲ್ಲಿ ಎಂ. ಇ. ಎಸ್. ಅಕಾಡೆಮಿಕ್ ಸೆಲ್ ಅಧ್ಯಕ್ಷ ರಾದ ಶ್ರೀ ಜಿ. ಎಸ್. ಭಟ್ ಉಪ್ಪೊಣಿ, ಪರಿಸರ ವಿಜ್ಞಾನಿ ಡಾ. ಪ್ರಭಾಕರ್ ಭಟ್, ಕಾಲೇಜಿನ ಮೇಲ್ವಿಚಾರಣಾ ಅಧಿಕಾರಿಗಳಾದ ಡಾ. ಟಿ. ಎಸ್. ಹಳೆಮನೆ, ಕಾಲೇಜಿನ ಪ್ರಾಚಾರ್ಯರಾದ ಗಣಪತಿ ಹೆಗಡೆ, ಡಾ.ಗಣೇಶ ಹೆಗಡೆ, ಡಾ. ಅನಿಲ್ ಕುಮಾರ್ ಹೆಗಡೆ ಮತ್ತು ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
