15
Aug 2025
INDEPENDENCE DAY–Dated On 15 August 2025
ನಮ್ಮ ಕಾಲೇಜಿನಲ್ಲಿ 79ನೆಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಉಪಸಮಿತಿಯ ಅಧ್ಯಕ್ಷರಾದ ಶ್ರೀ .ಎಲ್. ಆರ್ ಹೆಗಡೆ ಯವರು ಉಪಸ್ಥಿತರಿದ್ದು ಧ್ವಜಾರೋಹಣವನ್ನು ನಡೆಸಿಕೊಟ್ಟು, ಮಾತನಾಡಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಅದೇ ರೀತಿ ಪ್ರಾಂಶುಪಾಲರಾದ ಶ್ರೀ ಜಿ. ಜಿ.ಹೆಗಡೆ ಯವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಮಹಾತ್ಮರನ್ನು ನೆನೆಸಿ, ಅದೇ ರೀತಿ ಭಾರತದ ಹೆಮ್ಮೆಯಾದ “ಆಪರೇಷನ್ ಸಿಂಧೂರ” ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ನಂತರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಆತ್ಮ ನಿರ್ಭರ ಭಾರತ “ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನದ ಪ್ರಾಯೋಜಕರಾದ ಶ್ರೀ.ನಾರಾಯಣ ಭಟ್ ದಂಪತಿಗಳು ಬಹುಮಾನವನ್ನು ವಿತರಿಸಿದರು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.