15
Aug 2025
Farewell Function–Dated on 31 -July -2025
ನಮ್ಮ ಕಾಲೇಜಿನಲ್ಲಿ ಸುದೀರ್ಘವಾಗಿ ಮೂವತ್ತಾರು ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಶ್ರೀ. ರಮೇಶ ದೇಶಪಾಂಡೆ ಹಾಗೂ ಸುದೀರ್ಘವಾಗಿ ಇಪ್ಪತ್ತಾರು ವರ್ಷಗಳ ಕಾಲ ಗ್ರೂಪ್ ಡಿ ನೌಕರನಾಗಿ ಸೇವೆ ಸಲ್ಲಿಸಿದ ಶ್ರೀ ನಾಗರಾಜ್ ಸಿರ್ಸಿಕರ್ ಇವರ ಬೀಳ್ಕೊಡುಗೆಯನ್ನು ಜುಲೈ 31ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರತಿಷ್ಠಿತ ಎಂ. ಇ.ಎಸ್.ನ ಅಧ್ಯಕ್ಷರೂ ಆದ ಶ್ರೀ. ಜಿ.ಎಂ ಹೆಗಡೆ ಮುಳಕಂಡರವರು ನಿವೃತ್ತರನ್ನು ಸನ್ಮಾನಿಸಿದರು. ನಮ್ಮ ಕಾಲೇಜಿನ ಉಪಸಮಿತಿಯ ಅಧ್ಯಕ್ಷರಾದ ಶ್ರೀ ಎಲ್.ಆರ್ ಹೆಗಡೆ ಯವರೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು. ಪ್ರಾಂಶುಪಾಲರು ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.