07 Aug 2024

FAREWELL CEREMONY – DATED ON 31-07-2024

ನಮ್ಮ ಎಂ. ಇ. ಎಸ್ .ಆರ್ .ಎನ್. ಶೆಟ್ಟಿ ಪಾಲಿಟೆಕ್ನಿಕ್ ನ ವಿಜ್ಞಾನ ವಿಭಾಗದಲ್ಲಿ ಹಿರಿಯ ಶ್ರೇಣಿ ಉಪನ್ಯಾಸಕರಾಗಿ, ವಿಭಾಗಾಧಿಕಾರಿಯಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ,ಕಳೆದ ಒಂದು ವರ್ಷದಿಂದ ಪ್ರಾಂಶುಪಾಲರಾಗಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿದ, ಶ್ರೀ ಮಂಜುನಾಥ .ಆರ್. ಶೆಟ್ಟಿ ಇವರು ದಿನಾಂಕ 31/07/2024 ರಂದು ಸುದೀರ್ಘ 34 ವರ್ಷದ 6 ತಿಂಗಳು ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಅವರನ್ನು ಆಡಳಿತ ಮಂಡಳಿಯ ವತಿಯಿಂದ ಹಾಗೂ ನಮ್ಮ ಕಾಲೇಜಿನ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು. ಎಂ.ಇ.ಎಸ್ ನ ಅಧ್ಯಕ್ಷರಾದ ಶ್ರೀ .ಜಿ.ಎಂ ಹೆಗಡೆ ಮುಳಖಂಡ , ಖಜಾಂಚಿಗಳಾದ ಶ್ರೀ ಸುಧೀರ್ ಭಟ್, ಹಾಗೂ ಪಾಲಿಟೆಕ್ನಿಕ್ ನ ಉಪಸಮಿತಿಯ ಅಧ್ಯಕ್ಷರಾದ ಶ್ರೀ ಎಲ್ .ಆರ್ .ಹೆಗಡೆ ಉಪಸ್ಥಿತರಿದ್ದರು. ನಮ್ಮ ಕಾಲೇಜಿನ ಎಲ್ಲಾ ಸಿಬ್ಬಂದಿ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Download