02 Nov 2026

Free Health Camp — Dated on 27-10-2026

ಮಲ್ಟಿ ಸ್ಪೆಷಾಲಿಟಿ ವೆಲ್ ನೆಸ್ಟ್ ಆಸ್ಪತ್ರೆ ಮತ್ತು ಜ್ಞಾನ ತರಂಗಿಣಿ ಫೌಂಡೇಶನ್, ಯಲ್ಲಾಪುರ ಇವರ ಸoಯುಕ್ತ ಆಶ್ರಯದಲ್ಲಿ
27 ಅಕ್ಟೋಬರ್ 2026 ರಂದು ನಮ್ಮಎಂ.ಇ.ಎಸ್. ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಶಿರಸಿ ಯಲ್ಲಿ ಉಚಿತ ಬಹು ವೈದ್ಯಕೀಯ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ಶಿರಸಿ ಹಾಗೂ ಸುತ್ತಮುತ್ತಲಿನ ನೂರಾರು ಸಾರ್ವಜನಿಕರು ಶಿಬಿರದಲ್ಲಿ ಹೃದಯ ಸಮಸ್ಯೆಗಳ, ಕಣ್ಣುಗಳ ಸಮಸ್ಯೆಗಳ, ಮೂಳೆ ಮತ್ತು ಕೀಲು ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿಕೊಂಡು ಆರೋಗ್ಯ ಸಲಹೆ, ಪರಿಹಾರ ಮತ್ತು ಉಚಿತ ಔಷಧಿಗಳನ್ನು ಪಡೆದುಕೊಂಡರು. ಶಿಬಿರದಲ್ಲಿ ಮಹಿಳೆಯರ ಆರೋಗ್ಯ ಸಂಬಂಧಿಸಿದಂತೆಯೂ ತಪಾಸಣೆ , ಸಲಹೆ, ಪರಿಹಾರ ಮತ್ತು ಔಷಧಿಗಳನ್ನು ವಿತರಿಸಲಾಯಿತು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ನಮ್ಮ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶಾಂತರಾಮ್ ಭಟ್, ಚಿತ್ರಗಿ ಅವರು ಇಂತಹ ವೈದ್ಯಕೀಯ ಶಿಬಿರಗಳಿಂದ ಸಾಮಾನ್ಯ ಜನರು ತಜ್ಞ ವೈದ್ಯರ ಸಲಹೆ ಪಡೆಯುವುದರ ಜೊತೆಗೆ ಜನರಲ್ಲಿ ಆರೋಗ್ಯ ಜಾಗ್ರತಿ ಮೂಡಲು ಸಹಾಯಕವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ವೆಲ್ ನೆಸ್ಟ್ ಆಸ್ಪತ್ರೆಯ ನೇತ್ರ ತಜ್ಞ ಡಾಕ್ಟರ್ ಶ್ರೀ ಶೃತಿ ಅವರು ವೆಲ್ ನೆಸ್ಟ್ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ಪರೀಕ್ಷೆಗಳು ಮತ್ತು ಇತರೆ ವೈದ್ಯಕೀಯ ಸೇವೆಗಳು ಮತ್ತು ಅವುಗಳ ಅವಶ್ಯಕತೆಗಳನ್ನು ತಿಳಿಸಿ ಅವಶ್ಯವಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಜ್ಞಾನ ತರಂಗಣಿ ಫೌಂಡೇಶನ್ ನ ಅಧ್ಯಕ್ಷ ಶ್ರೀ ಅಪ್ಪು ವರಕ್ ಮತ್ತು ತಂಡದವರು ಆಯೋಜನೆಯಲ್ಲಿ ಪಾಲ್ಗೊಂಡಿದ್ದರು. ವೆಲ್ ನೆಸ್ಟ್ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳು ಆರೋಗ್ಯ ತಪಾಸಣೆಗಳನ್ನು ನಡೆಸಿಕೊಟ್ಟರು. ನಮ್ಮ ಕಾಲೇಜಿನ ಸರ್ವ ಸಿಬ್ಬಂದಿಗಳು ಈ ಸಾಮಾಜಿಕ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.