Inauguration of Sports and Cultural Activities & Endowment Prize Distribution Programme–Dated on 05-09-2026



ನಮ್ಮ ಕಾಲೇಜಿನಲ್ಲಿ 05/09/2026 ರಂದು 2026-2027 ನೇ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ದತ್ತಿನಿಧಿ ಬಹುಮಾನ ವಿತರಣೆ, ಕೌಶಲ್ಯ ಸಂಚಿಕೆ ಬಿಡುಗಡೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಇ. ಎಸ್ ಅಧ್ಯಕ್ಷರಾದ ಶ್ರೀ ಜಿ. ಎಂ. ಹೆಗಡೆ ಮುಳಖಂಡ ರವರು ವಹಿಸಿದ್ದರು. ಶ್ರೀ ವಿನಾಯಕ ಶೇಟ್ -ಧರ್ಮದರ್ಶಿಗಳು, ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಉಪಸಮಿತಿ ಅಧ್ಯಕ್ಷರಾದ ಶ್ರೀ ಎಲ್. ಆರ್. ಹೆಗಡೆ ಯವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶಾಂತರಾಮ ಭಟ್ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಶ್ರೀ ಸುಧೀರ್ ಶಾನಭಾಗ ಕಾರ್ಯಕ್ರಮವನ್ನು ನಿರೂಪಿಸಿದರು. ಅದೇ ರೀತಿ ದತ್ತಿ ನಿಧಿ ಬಹುಮಾನ ವಿತರಣೆ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಅನಂತ ನಾಯಕ್ ನಿರ್ವಹಿಸಿದರು. ಶ್ರೀ ಮಿಥುನ್ ಪರಾಂಜಪೆ ಇವರು ವಂದಿಸಿದರು. ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.