Farewell Function –Dated on 31-07-2026
ನಮ್ಮ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಾಗೂ ಕಳೆದ ಒಂದು ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿ 36 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯನ್ನು ಹೊಂದಿದ ಶ್ರೀ.ಜಿ.ಜಿ ಹೆಗಡೆ ಇವರ ಬೀಳ್ಕೊಡುಗೆ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಂ.ಇ.ಎಸ್ ಜಂಟಿ ಕಾರ್ಯದರ್ಶಿಗಳು ಹಾಗೂ ನಮ್ಮ ಕಾಲೇಜಿನ ಉಪಸಮಿತಿಯ ಅಧ್ಯಕ್ಷರು ಆಗಿರುವ ಶ್ರೀ ಎಲ್.ಆರ್ ಹೆಗಡೆ, ಎಂ.ಇ.ಎಸ್ನ ಜಂಟಿ ಕಾರ್ಯದರ್ಶಿಗಳು ಹಾಗೂ ಅಕಾಡೆಮಿಕ್ ಸೆಲ್ ನ ಅಧ್ಯಕ್ಷರು ಆಗಿರುವ ಶ್ರೀ ಜಿ.ಎಸ್ ಭಟ್ ಉಪ್ಪೋಣಿ ಹಾಗೂ ಎಂ.ಇ.ಎಸ್ ನ ಪದಾಧಿಕಾರಿಗಳು, ಮಾನಿಟರಿಂಗ್ ಸೆಲ್ ನ ಅಧ್ಯಕ್ಷರು ಹಾಗೂ ನಮ್ಮ ಕಾಲೇಜಿನ ಮೇಲ್ವಿಚಾರಣಾ ಅಧಿಕಾರಿಗಳು ಆಗಿರುವ ಶ್ರೀ.ಟಿ .ಎಸ್ ಹಳೆಮನೆ ಯವರು ಉಪಸ್ಥಿತರಿದ್ದು , ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸೆಪ್ಟೆಂಬರ್ 15ರಂದು ಇಂಜಿನಿಯರ್ಸ್ ಡೇ ಅಂಗವಾಗಿ ಕಾಲೇಜಿನಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಪ್ರಥಮ ವಿಜೇತರಿಗೆ ಬಹುಮಾನವಾಗಿ ಹಣವನ್ನು ನೀಡಬೇಕೆಂದು ಶ್ರೀಯುತ ಜಿ.ಜಿ ಹೆಗಡೆಯವರು ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ದತ್ತಿನಿದಿಯಾಗಿ ಇಟ್ಟು ಅದನ್ನು ಉಪಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದುದು ವಿಶೇಷವಾಗಿತ್ತು. ಕಾರ್ಯಕ್ರಮದ ನಂತರದಲ್ಲಿ ಶ್ರೀ.ಜಿ.ಜಿ ಹೆಗಡೆಯವರು,ನೂತನ ಪ್ರಾಂಶುಪಾಲರಾಗಿ ನಿಯೋಜಿತಗೊಂಡ ಶ್ರೀ ಶಾಂತರಾಮ್ ಭಟ್ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳು ಇದರಲ್ಲೂ ಉಪಸ್ಥಿತರಿದ್ದು, ನೂತನವಾಗಿ ಅಧಿಕಾರ ಸ್ವೀಕರಿಸಿಕೊಂಡ ಶಾಂತರಾಮ್ ಭಟ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.



