College Annual Day, Felicitation Ceremony of Shri Venkatesh Badageri and Inauguration of Smart Classroom..-Dated on 17-04-2026
ದಿನಾಂಕ 17-04-2026ರಂದು ನಮ್ಮ ಎಂ.ಇ.ಎಸ್ ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಕಾಲೇಜಿನ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಶ್ರೀಮತಿ ಗೀತಾ ಪಾಟೀಲ ಡಿವೈಎಸ್ಪಿ ಶಿರಸಿ ಉಪವಿಭಾಗ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ,ನಮ್ಮ ಕಾಲೇಜಿನ ಉಪಸಮಿತಿಯ ಅಧ್ಯಕ್ಷರಾದ ಶ್ರೀ .ಎಲ್.ಆರ್. ಹೆಗಡೆ ಮುಂಡಗೇಸರ ಅವರು ವಹಿಸಿದ್ದರು. ಉಪಸಮಿತಿ ಸದಸ್ಯರಾದ ಶ್ರೀ ಪಾಂಡುರಂಗ ಪೈ ಅವರು ಭಾಗವಹಿಸಿದ್ದರು.ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಮೆಕ್ಯಾನಿಕಲ್ ವಿಭಾಗಕ್ಕಾಗಿ ಹೊಸದಾಗಿ ವ್ಯವಸ್ಥೆಗೊಳಿಸಿದ ಸ್ಮಾರ್ಟ್ ಕ್ಲಾಸ್ ರೂಮನ್ನು ಉದ್ಘಾಟಿಸಲಾಯಿತು. ನಂತರ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ, ನಮ್ಮ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಜಿ ಹೆಗಡೆಯವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿ ,ವರದಿ ವಾಚನವನ್ನು ನಡೆಸಿಕೊಟ್ಟರು, ವಿದ್ಯಾರ್ಥಿಗಳಿಂದ ಅತಿಥಿಗಳ ಪರಿಚಯವನ್ನು ಮಾಡಿಕೊಡಲಾಯಿತು. ಮತ್ತು ಈ ಒಂದು ಸುಂದರ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ E &C ವಿಭಾಗದ ಉಪನ್ಯಾಸಕರಾದ ಶ್ರೀ ವೆಂಕಟೇಶ ಬಡಿಗೇರಿ ಇವರನ್ನು ಸನ್ಮಾನಿಸಲಾಯಿತು.ಇವರು ಬಯೋ ಮೆಡಿಕಲ್ ಸೆನ್ಸರ್ಸ್ ಮೇಲೆ ಸಂಶೋಧನೆ ನಡೆಸಿ ಕ್ಯಾನ್ಸರ್ ಹಾಗೂ ಮಲೇರಿಯಾ ರೋಗದ ಮೂಲವನ್ನು ಪತ್ತೆ ಮಾಡುವ ತಂತ್ರಜ್ಞಾನದ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧ IEEE ಅಂತರಾಷ್ಟ್ರೀಯ magazine ನಲ್ಲಿ ಪ್ರಕಟಗೊಂಡಿದ್ದು, ಅಷ್ಟೇ ಅಲ್ಲದೆ ಇವರು ಮೈಸೂರಿನ CPC ಪಾಲಿಟೆಕ್ನಿಕ್ ನ ಉಪನ್ಯಾಸಕರಾದ ಶ್ರೀ ರಂಜಿತ್ ಗೌಡ ಇವರ ಜೊತೆಗೂಡಿ ಮಂಡಿಸಿದ ಇದೇ ಪ್ರಬಂಧಕ್ಕೆ ಕರ್ನಾಟಕ ಸರ್ಕಾರ (KITS ) 1.25 ಕೋಟಿಯ ಅನುದಾನವನ್ನು ಮೈಸೂರಿನ CPC ಪಾಲಿಟೆಕ್ನಿಕ್ ಗೆ ಮಂಜೂರು ಮಾಡಿದೆ.ಈ ವಿಶಿಷ್ಟ ಸಾಧನೆಗಾಗಿ ಶ್ರೀ ವೆಂಕಟೇಶ್ ಬಡಗೇರಿ ಇವರನ್ನು ಕಾರ್ಯಕ್ರಮದ ಅತಿಥಿ ಗಳಾದ ಶ್ರೀಮತಿ ಗೀತಾ ಪಾಟೀಲ,ಅಧ್ಯಕ್ಷರಾದ ಶ್ರೀ.ಎಲ್.ಆರ್ ಹೆಗಡೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಪಾಂಡುರಂಗ ಪೈ ,ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಸೇರಿ ಸನ್ಮಾನಿಸಲಾಯಿತು.
ನಂತರ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಾಗೆ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉದ್ಯೋಗ ಪತ್ರಗಳನ್ನು ನೀಡಲಾಯಿತು.ಅತಿಥಿಗಳಾದ ಶ್ರೀಮತಿ ಗೀತಾ ಪಾಟೀಲ್ ಅವರು, ವಿದ್ಯಾರ್ಥಿಗಳನ್ನ ಉದ್ದೇಶಿಸಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ನಂತರ ಉಪಸಮಿತಿ ಸದಸ್ಯರಾದ ಶ್ರೀಯುತ ಪಾಂಡುರಂಗ ಪೈ ರವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ನಮ್ಮ ಉಪ ಸಮಿತಿ ಅಧ್ಯಕ್ಷರಾದ ಶ್ರೀ ಎಲ್. ಆರ್ ಹೆಗಡೆ ಇವರು ಎಲ್ಲ ವಿದ್ಯಾರ್ಥಿಗಳಿಗೂ ಶುಭಕೋರಿ ,ಸರಿಯಾಗಿ ಅಭ್ಯಾಸಮಾಡಿ ಪರೀಕ್ಷೆಯಲ್ಲೂ ಉತ್ತಮ ಅಂಕವನ್ನು ಪಡೆದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎನ್ನುವ ಕಿವಿಮಾತನ್ನು ಹೇಳಿದರು.
ಶ್ರೀ ಸುದೀರ್ ಶಾನಬಾಗ್ ಹಾಗೂ ಶ್ರೀ ಅನಂತ ಆರ್ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ದಿನೇಶ್ ಸಮ್ಮಸಗಿಕರ್ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ನೃತ್ಯ, ಗಾಯನ ಹಾಗೂ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆಯಿತು.






