31
Mar 2026
Farewell function –Dated on 31-03-2026
ಇಂದು 31-03-2026 ರಂದು ಸುದೀರ್ಘ 32 ವರ್ಷಗಳ ಕಾಲ ನಮ್ಮ ಕಾಲೇಜಿನಲ್ಲಿ ಇ & ಇ ವಿಭಾಗದಲ್ಲಿ ಸಹಾಯಕ ಬೋಧಕರಾಗಿ ಸೇವೆಸಲ್ಲಿಸಿ ವಯೋನಿವೃತ್ತಿಯನ್ನು ಹೊಂದಿದ ಶ್ರೀ ನಾಗರಾಜ ಬಲಿ ಇವರ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಂ.ಇ.ಎಸ್ ನ ಅಧ್ಯಕ್ಷರಾದ ಶ್ರೀ ಜಿ.ಎಂ.ಹೆಗಡೆ ಮುಳಖಂಡ ಮತ್ತು ನಮ್ಮ ಕಾಲೇಜಿನ ಉಪಸಮಿತಿ ಚೇರ್ಮನ್ ರಾದ ಶ್ರೀ. ಎಲ್.ಆರ್ ಹೆಗಡೆ ಯವರು ಆಗಮಿಸಿ ನಿವೃತ್ತರನ್ನು ಸನ್ಮಾನಿಸಿ ಶುಭಹಾರೈಕೆಯ ಮಾತುಗಳನ್ನಾಡಿದರು. ಪ್ರಾಂಶುಪಾಲರಾದ ಶ್ರೀ ಜಿ. ಜಿ.ಹೆಗಡೆ ಯವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ.ಶಾಂತಾರಾಮ್ ಭಟ್, ಶ್ರೀ ಸತೀಶ್ ನಾಯ್ಕ್, ಶ್ರೀ ಸಂಜಯ್ ಕೂರ್ಸೆ, ಶ್ರೀ ಆನಂದ ಬಿ. ಜಿ , ಶ್ರೀ ವೆಂಕಟೇಶ್ ಬಡಿಗೇರಿ, ಶ್ರೀ ಎಸ್. ಟಿ ಹೆಗಡೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀ ಅನಂತ ನಾಯಕ ನಿರೂಪಣೆಯನ್ನು ನಡೆಸಿಕೊಟ್ಟರು ಮತ್ತು ವಂದಿಸಿದರು..