12/02/2025 ರಿಂದ 14/02/2025 ರ ವರೆಗೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್ ನಲ್ಲಿ ಹಲವು ವಿದ್ಯಾರ್ಥಿಗಳು ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆದರು.
05/04/2025 ರಂದು ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು. ಎಂ.ಇ.ಎಸ್ ನ ಅಧ್ಯಕ್ಷರಾದ ಶ್ರೀ .ಜಿ. ಎಂ. ಹೆಗಡೆ ಮುಳಖಂಡರವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ. ಮಹಾಂತಪ್ಪ ಕಮ್ಮಾರ್, ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಶಿರಸಿ, ಶ್ರೀ. ನಾಗರಾಜ್ ಮತ್ತಿಗಾರ್ ಸ್ಥಾನಿಕ ಸಂಪಾದಕರು ಲೋಕದ್ವನಿ ಶಿರಸಿಯ ಪ್ರಸಿದ್ಧ ಆರ್ಕಿಟೆಕ್ಟ್ ಹಾಗೂ ಸಿವಿಲ್ ಇಂಜಿನಿಯರ್ ಮತ್ತು ಪಿ.ಕೆ.ಪ್ರೊ ಹಾಲಳ್ಳ ಇದರ ಮಾಲೀಕರು ಆದ ಶ್ರೀ. ಮನು ಹೆಗಡೆ ಇವರುಗಳು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮನು ಹೆಗಡೆ ಇವರ ವಿಶೇಷ ಸಾಧನೆಗಾಗಿ ಎಂ .ಇ. ಎಸ್ ಹಾಗೂ ನಮ್ಮ ಪಾಲಿಟೆಕ್ನಿಕ್ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ನಮ್ಮ ಕಾಲೇಜಿನ ಉಪಸಮಿತಿಯ ಅಧ್ಯಕ್ಷರಾದ ಶ್ರೀ. ಎಲ್ .ಆರ್. ಹೆಗಡೆ ಯವರು ಹಾಗೂ ಉಪಸಮಿತಿಯ ಸದಸ್ಯರಾದ ಶ್ರೀ. ಪಾಂಡುರಂಗ ಪೈ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.