07 Nov 2025

Sri. Bhagavadgeetha Abhiyana and Kannada Rajyotsava(01/11/2025)– Dated On 30-10-2025 TO 05-11-2025

ನಮ್ಮ ಕಾಲೇಜಿನಲ್ಲಿ ಕಳೆದ ವರ್ಷದಂತೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಮತ್ತು
ಶ್ರೀ ಶ್ರೀಮದ್ ಆನಂದ ಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲಿ ಮಠ, ಸೋಂದಾ ಇವರ ಕೃಪಾಶೀರ್ವಾದದೊಂದಿಗೆ ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ಏಳು ದಿನಗಳ ಕಾಲ ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಪ್ತಾಹದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕಳೆದ ಮೂರು ವರ್ಷದಿಂದ ಈ ಆಧ್ಯಾತ್ಮಿಕ ಸಪ್ತಾಹವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳುತ್ತಿದ್ದು, ಈ ವರ್ಷ ಭಗವದ್ಗೀತೆಯ 11ನೇ ಅಧ್ಯಾಯವಾದ “ವಿಶ್ವರೂಪ ದರ್ಶನ “ವನ್ನು ಪಠಿಸಲಾಯಿತು. ಈ ಕಾರ್ಯಕ್ರಮವನ್ನು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಾತ್ರ ಮಂಡಳಿ ಸದಸ್ಯರಾದ ಶ್ರೀಮತಿ ವೇದಾ ಹೆಗಡೆ ನೀರ್ನಳ್ಳಿ ಹಾಗೂ ಶ್ರೀಮತಿ ಗೀತಾ ಜೋಶಿ ಮೂಲೆಮನೆ ಇವರುಗಳು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎಂ.ಇ.ಎಸ್ ಅಧ್ಯಕ್ಷರಾದ ಶ್ರೀ ಜಿ.ಎಂ ಹೆಗಡೆ ಮುಳಖಂಡ ಹಾಗೂ ಉಪಸಮಿತಿಯ ಚೇರ್ಮನ್ ರಾದ
ಶ್ರೀ ಎಲ್.ಆರ್ ಹೆಗಡೆ ಮುಂಡಗೇಸರ ಅವರು ಹರ್ಷ ವ್ಯಕ್ತಪಡಿಸಿ, ಈ ಅಭಿಯಾನವು ವಿದ್ಯಾರ್ಥಿಗಳ ನೈತಿಕ , ಆಧ್ಯಾತ್ಮಿಕ, ಜೀವನಮೌಲ್ಯ ಮತ್ತು ಮಾನಸಿಕ ಆರೋಗ್ಯ, ದೃಢತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿಯಾಗಿದೆ ಎನ್ನುವ ಸಂದೇಶವನ್ನು ನೀಡಿರುತ್ತಾರೆ.

ನಮ್ಮ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕದ ವತಿಯಿಂದ 1/11/2025 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಎಲ್ಲ ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಿದ್ದರು.

Download