28 Jul 2024

OPEN WELL OPENING PROGRAMME – DATED ON 29 -06 -2024

ಕಾಲೇಜಿನ ಕುಡಿಯುವ ,ಶುದ್ಧ ನೀರಿನ ಅವಶ್ಯಕತೆಗಾಗಿ ಹೊಸದಾಗಿ ಬಾವಿಯನ್ನು ಎಲ್ಲಾ ಸಿಬ್ಬಂದಿಗಳೇ ಆಡಳಿತ ಮಂಡಳಿಯ ಅನುಮತಿ ಪಡೆದು ,ವೈಯಕ್ತಿಕ ದೇಣಿಗೆಯಿಂದ ನಿರ್ಮಿಸಿ ಸಮರ್ಪಿಸಲು ನಿರ್ಧರಿಸಲಾಯಿತು. ಅದರಂತೆ ದಿನಾಂಕ 17/4/2024 ರಂದು ಈ ಕಾರ್ಯವನ್ನು ದೇವತಾ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ನಮ್ಮ ಪಾಲಿಟೆಕ್ನಿಕ್ ಕಾಲೇಜಿನ ಮಾಜಿ ಪ್ರಾಚಾರ್ಯರು ,         ಎಂ.ಇ .ಎಸ್ ಸಂಸ್ಥೆಯ ಸದಸ್ಯರು ಆದ , ಶ್ರೀ ಸಿ. ಜಿ . ಭಟ್ ಚಿತ್ರಿಗಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ದಿನಾಂಕ 29/6/2024 ರಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಿ .ಎಂ. ಹೆಗಡೆ ಮುಳಖಂಡ್ ಅವರಿಂದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಳಿದ ಪದಾಧಿಕಾರಿಗಳು ಭಾಗವಹಿಸಿದ್ದರು. ಎಲ್ಲಾ ಸಿಬ್ಬಂದಿಗಳ ತನು,ಮನ ,ಧನಗಳ ಸಹಾಯದಿಂದ ಈ ಬಾವಿ ಕೆಲಸವು ಸರಾಗವಾಗಿ ನೆರವೇರಲ್ಪಟ್ಟಿತು. ವಿಶೇಷವಾಗಿ ಪ್ರಾಂಶುಪಾಲರಾದ ಶ್ರೀ ಎಂ.ಆರ್. ಶೆಟ್ಟಿಯವರು ಹಾಗೂ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಎಂ. ವಿ. ಕೋರಿ ಅವರು ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದು ಗಮನಾರ್ಹ ಮತ್ತು ಸ್ಮರಣೀಯ, ಅವರಿಗೆ ಧನ್ಯವಾದಗಳು. ಕೊನೆಯಲ್ಲಿ ಬಾವಿ , ಕಂಪ್ಯೂಟರ್ ಹಾಗೂ ಇತರೆ ಕೆಲಸಗಳಿಗೆ ದೇಣಿಗೆ ನೀಡಿದ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನಾ ಪತ್ರವನ್ನು ಆಡಳಿತ ಮಂಡಳಿಯ ಕಡೆಯಿಂದ ನೀಡಲಾಯಿತು.

.

Download