National Youth Day–Dated on 12-01-2026
ನಮ್ಮ ಕಾಲೇಜಿನಲ್ಲಿ ಜನವರಿ ೧೨ ರಂದು ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಶ್ರೀಯುತ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾರತ ಗುಲಾಮ ಸ್ಥಿತಿಯಲ್ಲಿ ಇರುವಾಗ ಭಾರತವು ಏನು ಎಂಬುವದನ್ನು, ವಿದೇಶಿಯರಿಗೆ ಅಲ್ಲದೇ ಭಾರತೀಯರಿಗೂ ಕೂಡ ತೊರಿಸಿದ್ದು ಸ್ವಾಮಿ ವಿವೇಕಾನಂದರು. ಭಾರತವು ಜ್ಞಾನದ ಕಾರಣದಿಂದ ವಿಶ್ವಗುರುವಾಗಿದ್ದು, ಭಾರತೀಯರ ಜ್ಞಾನದ ಮಹತ್ವವನ್ನು ತಿಳಿಸಿ, ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿ ಮೂಡಿಸಿದ್ದಾರೆ. “ಭಾರತ ಸ್ವಯಂವೇವ ಪ್ರಯತ್ನತಃ” ಎನ್ನುವ ಹಾಗೆ ನಾವು ನಾವಾಗಿ ಜಗತ್ತಿಗೆ ಜ್ಞಾನವನ್ನು ಕೊಡುವಂತೆ ಜಗತ್ತಿಗೆ ಗುರುವಾಗುವಂತೆ ಎಲ್ಲ ಜನರು ದೇಶವನ್ನು ಮುನ್ನಡೆಸಬೇಕು. ಅದಲ್ಲದೇ ಈ ದಿನ ಇನ್ನೊಂದು ವಿಶೇಷತೆಗೆ ಕಾರಣವೆನೆಂದರೇ, ಛತ್ರಪತಿ ಶಿವಾಜಿ ಮಹಾರಾಜರ ತಾಯಿಯಾದ ಜೀಜಾಬಾಯಿ ಅವರ ಜನ್ಮದಿನ ಎಂದು ಅವರನ್ನು ಸ್ಮರಿಸುತ್ತ, ವಿವೇಕವಾಣಿಯಾದ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಎಲ್ಲ ಯುವಕರಿಗೆ ಹಿತವಚನ ಹೇಳಿ ರಾಷ್ಟ್ರೀಯ ಯುವ ದಿನಾಚರಣೆಯ ಶುಭಕೋರಿದಲ್ಲದೇ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ನಮ್ಮ ಕಾಲೇಜಿನ ಮೇಲ್ವಿಚಾರಣಾಧಿಕಾರಿಯಾದ ಟಿ.ಎಸ್ ಹಳೇಮನೆ, ಪ್ರಾಚಾರ್ಯರಾದ ಗಣಪತಿ ಹೆಗಡೆ, ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎನ್.ಎಸ್.ಎಸ್ ವಿಭಾಗದ ಸಂಯೋಜಕರಾದ ಗಣಪತಿ ಶೇಟ್ ಅವರು ನಡೆಸಿಕೊಟ್ಟರು.
