07 Sep 2025

Inauguration of Cultural and Sports activities— Dated on 03-09-2025


ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಅಭಿವೃದ್ದಿಗೆ 1 ಲಕ್ಷ ರೂ ದೇಣಿಗೆ ರೂಪದಲ್ಲಿ ಚೆಕ್ ನೀಡಿದ ಕೆರೆ ಹೆಬ್ಬಾರ್.

ವಿದ್ಯಾರ್ಥಿಗಳು ತಮ್ಮ ಬದುಕಿನ ಜೊತೆಯಲ್ಲಿ ಸಾಮಾನ್ಯ ತಿಳುವಳಿಕೆಯನ್ನು ಅರಿತುಕೊಂಡಿರಬೇಕು.ಕಳೆದು ಹೋದ ಸಮಯ ಮತ್ತೆ ಬರಲಾರದು.ಆದ್ದರಿಂದ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ತಿಳಿಸಿದರು.ಅವರಿಂದು ನಮ್ಮ ಎಂ.ಇ.ಎಸ್‌ ಆರ್‌.ಎನ್. ಶೆಟ್ಟಿ ಪಾಲಿಟೆಕ್ನಿಕ್ ನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟಿಸಿದ ಬಳಿಕ ದತ್ತಿನಿಧಿ ಬಹುಮಾನ ವಿತರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಅದ್ಯಕ್ಷತೆ ಎಂ.ಇ.ಎಸ್ ಅಧ್ಯಕ್ಷರು ಜಿ. ಎಂ ಹೆಗಡೆ ಮುಳಖಂಡ ವಹಿಸಿದ್ದರು. ಉಪಸಮಿತಿಯ ಚೇರಮನ್ ಎಲ್. ಆರ್. ಹೆಗಡೆ ಮುಂಡಗೇಸರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರಾದ ಗಣಪತಿ ಹೆಗಡೆ ಸ್ವಾಗತಿಸಿದರು, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ನವೀನ್ ಶೆಟ್ಟಿ ಅತಿಥಿಗಳ ಪರಿಚಯವನ್ನು ಮಾಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂಜಯ್ ಕೂರ್ಸೆ ಕಾರ್ಯಕ್ರಮದ ನಿರೂಪಣೆ ಮಾಡಿದರು.


Download