Engineer’s Day : Dated on 15-09-2025
ದಿನಾಂಕ 15 -09- 2025 ರಂದು ನಮ್ಮ ಕಾಲೇಜಿನಲ್ಲಿ ಸರ್ .ಎಂ .ವಿಶ್ವೇಶ್ವರಯ್ಯನವರ 164ನೇ ಜನ್ಮದಿನೋತ್ಸವ “ಇಂಜಿನಿಯರ್ಸ್ ಡೇ” ಕಾರ್ಯಕ್ರಮವನ್ನು ಆಚರಿಸಲಾಯಿತು. ನಿವೃತ್ತ AEE ಶ್ರೀ .ಬಿ .ಜಿ .ಹೆಗಡೆ ಇವರು ಉಪಸ್ಥಿತರಿದ್ದು ವಿಶ್ವೇಶ್ವರಯ್ಯನವರ ಸಾಧನೆ ಬಗ್ಗೆ ತಿಳಿಸಿದರು. ಶಿರಸಿ ಇಂಜಿನಿಯರ್ಸ್ & ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ .ಶ್ಯಾಮ ಸುಂದರ್ ಭಟ್ ಇವರು ಶಿಕ್ಷಣ ಮುಗಿದ ತಕ್ಷಣ ದುಡ್ಡಿನ ಹಿಂದೆ ಬೀಳದೆ ಕೆಲಸದ ಅನುಭವ ಮಾಡಿಕೊಳ್ಳಬೇಕು ಎಂದು ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು. ಶಿರಸಿ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಸೆಕ್ರೆಟ್ರಿಯವರಾದ ಶ್ರೀ ಎಲ್. ಆರ್ ಹೆಗಡೆ ಶುಭ ಕೋರಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಜಿ .ಹೆಗಡೆ ಇವರು ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಮತ್ತು ಆರ್. ಎನ್ .ಶೆಟ್ಟಿ ಪಾಲಿಟೆಕ್ನಿಕ್ ಮಧ್ಯೆ ಇರುವ ಗಾಢವಾದ ಸಂಬಂಧವನ್ನು ವಿವರಿಸಿ ನಮ್ಮ ವಿದ್ಯಾರ್ಥಿಗಳನ್ನು ಅಸೋಸಿಯೇಷನ್ ಪ್ರೋತ್ಸಾಹಿಸಿದ್ದರ ಬಗ್ಗೆ ಅಭಿನಂದಿಸಿದರು. ಕಾಲೇಜಿನ ಸಿವಿಲ್ ವಿಭಾಗದ ಉಪನ್ಯಾಸಕರಾದ ಶ್ರೀ ಜಯಂತ .ನಾಯ್ಕ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.