04 Jul 2025

Bhagavad Gita & Farewell Function– Dated 31-12-2024

05-11-2024  ರಂದು ಕರ್ನಾಟಕ ರಾಜ್ಯೋತ್ಸವದ ನಿಮಿತ್ತ “ನನ್ನ ಹಾಡು ನನ್ನ ನಾಡು ” ಎಂಬ ವಿನೂತನ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ಪ್ರತಿ ವರ್ಷದಂತೆ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಮಹಾಸ್ವಾಮಿಗಳು ಸ್ವರ್ಣವಲ್ಲಿ ಮಠ ಸೋಂದಾ ಇವರ ಕೃಪಾಶೀರ್ವಾದಗಳೊಂದಿಗೆ ತಾರೀಕು 28/11/2024 ರಿಂದ 04/12/2024 ರ ವರೆಗೆ ಒಂದು ವಾರಗಳ ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ಶ್ರೀಮತಿ ವೇದಾ ಹೆಗಡೆ ಮತ್ತು ಶ್ರೀಮತಿ ಗೀತಾ ಜೋಶಿ ಇವರ ಮಾರ್ಗದರ್ಶನದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಿಧ್ಯಾರ್ಥಿ/ವಿಧ್ಯಾರ್ಥಿನಿಯರೂ ಭಗವದ್ಗೀತೆಯ ಶ್ಲೋಕವನ್ನ ಪಠಣ ಮಾಡಿದರು.

31/12/2024 ರಂದು ನಮ್ಮ ಕಾಲೇಜಿನಲ್ಲಿ ಇ & ಇ ವಿಭಾಗದಲ್ಲಿ ಉಪನ್ಯಾಸಕರಾಗಿ ಹಾಗೂ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀ ಎಮ್.ವಿ ಕೋರಿ ಮತ್ತು ಹಲವು ವರ್ಷಗಳಿಂದ ರಾತ್ರಿ ಕಾವಲುಗಾರರಾಗಿ ಸೇವೆ ಸಲ್ಲಿಸಿದ ಶ್ರೀ ಮಧುಕೇಶ್ವರ ಹೆಗಡೆ ಇವರುಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಉಪಸಮಿತಿ ಅಧ್ಯಕ್ಷರಾದ ಶ್ರೀ ಎಲ್. ಆರ್ ಹೆಗಡೆ ಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ದೇಶಪಾಂಡೆಯವರು, ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.