ದಿನಾಂಕ 30-09 -2025 ದುರ್ಗಾಷ್ಟಮಿಯಂದು ನಮ್ಮ ಕಾಲೇಜಿನಲ್ಲಿ ಆಯುಧ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಮೆಕ್ಯಾನಿಕಲ್ ವಿಭಾಗದ ಮೆಷಿನ್ ಲ್ಯಾಬ್ ನಲ್ಲಿ ಪೂಜೆಯ ಸಂಕಲ್ಪ ವನ್ನು ನೆರವೇರಿಸಿ, ವಿವಿಧ ವಿಭಾಗಗಳಲ್ಲಿ, ಪ್ರಯೋಗಾಲಯಗಳಲ್ಲಿ ಸಂಭ್ರಮದಿಂದ ಪೂಜೆಯನ್ನು ಮಾಡಲಾಯಿತು. ಕೊನೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮೆಷಿನ್ ಲ್ಯಾಬ್ ನಲ್ಲಿ ಮಹಾಮಂಗಳಾರತಿಯನ್ನು ನೆರವೇರಿಸಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು, ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.