22 Nov 2024

AYUDHA PUJA – DATED ON -10/10/2024

ದಿನಾಂಕ 10-10-2024 ರಂದು ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ “ಆಯುಧ ಪೂಜಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊದಲಿಗೆ ಮೆಕ್ಯಾನಿಕಲ್ ಮಷೀನ್ ಲ್ಯಾಬ್ ನಲ್ಲಿ ಸಂಕಲ್ಪವನ್ನು ನೆರವೇರಿಸಿ, ನಂತರದಲ್ಲಿ ವಿವಿಧ ವಿಭಾಗಗಳಲ್ಲಿ ಪೂಜೆಗಳನ್ನು ನೆರವೇರಿಸಲಾಯಿತು. ಕೊನೆಯಲ್ಲಿ ಮೆಕ್ಯಾನಿಕಲ್ ಮಷೀನ್  ಲ್ಯಾಬ್ ನಲ್ಲಿ ಮಹಾ ಮಂಗಳಾರತಿಯನ್ನು ನೆರವೇರಿಸಿ, ಪ್ರಸಾದ ವಿತರಣೆಯನ್ನು ಮಾಡಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಕಾಲೇಜಿನ ಎಲ್ಲಾ ಬೋಧಕ , ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾದರು.

Download